ಪ್ರಿಯಾಂಕಾ ಗೋಸ್ವಾಮಿ (ಜನನ ೧೦ ಮಾರ್ಚ್ ೧೯೯೬) ೨೦ ಕಿ.ಮೀ. ಓಟದ ನಡಿಗೆಯಲ್ಲಿ ಸ್ಪರ್ಧಿಸಿದ ಭಾರತೀಯ ಕ್ರೀಡಾಪಟು. ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅದರಲ್ಲಿ ೧೭ ನೇ ಸ್ಥಾನವನ್ನು ಪಡೆದರು. ಅವರು ೨೦೨೨ ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ೧೦,೦೦೦ ಕಿಲೋಮೀಟರ್ ನಡಿಗೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ೧೦,೦೦೦ ಮೀಟರ್ ಓಟದ ನಡಿಗೆಯಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಇವರಾಗಿದ್ದಾರೆ. == ಜೀವನಚರಿತ್ರೆ == ಗೋಸ್ವಾಮಿ ಅವರು ಅಥ್ಲೆಟಿಕ್ಸ್‌ಗೆ ಬರುವ ಮೊದಲ ಕೆಲವು ತಿಂಗಳುಗಳ ಕಾಲ ಶಾಲೆಯಲ್ಲಿ ಜಿಮ್ನಾಸ್ಟಿಕ್ಸ್ ಅಭ್ಯಾಸ ಮಾಡಿದರು. ಯಶಸ್ವಿ ಸ್ಪರ್ಧಿಗಳಿಗೆ ಲಭ್ಯವಿರುವ ಬಹುಮಾನದ ಗೀಳಿಂದಾಗಿ ಅವರು ಓಟ ಕಡೆಗೆ ಆಕರ್ಷಿತರಾದರು. ಫೆಬ್ರವರಿ ೨೦೨೧ ರಲ್ಲಿ ಅವರು ೨೦ ಕಿಮೀ ಓಟದಲ್ಲಿ ಭಾರತೀಯ ರೇಸ್‌ವಾಕಿಂಗ್ ಚಾಂಪಿಯನ್‌ಶಿಪ್ ಅನ್ನು ೧:೨೮:೪೫ ರ ಹೊಸ ಭಾರತೀಯ ದಾಖಲೆಯೊಂದಿಗೆ ಗೆದ್ದರು. ಇದರಿಂದ ೨೦೨೦ ರ ಬೇಸಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಅವರು ಈ ಹಿಂದೆ ೨೦೧೭ ರಲ್ಲಿ ಇಂಡಿಯನ್ ರೇಸ್‌ವಾಕಿಂಗ್ ಚಾಂಪಿಯನ್‌ಶಿಪ್ ಗೆದ್ದಿದ್ದರು. ಅವರು ಭಾರತೀಯ ರೈಲ್ವೆಯ ಓಎಸ್ ಆಗಿ ಕೆಲಸ ಮಾಡುತ್ತಿದ್ದಾರೆ. == ಉಲ್ಲೇಖಗಳು ==